ಉಳಿದವರು ಕಂಡಂತೆ ಒಂದು ಕನ್ನಡ ಚಲನಚಿತ್ರ. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಿಂದ ಪ್ರಸಿದ್ದಿಯಾಗಿರುವ ರಕ್ಷಿತ್ ಶೆಟ್ಟಿಯವರ ಪ್ರಥಮ ನಿರ್ದೇಶನದ ಈ ಚಿತ್ರದಲ್ಲಿ,ತಾರಾ, ಕಿಶೋರ್,ಯಜ್ನ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿಯವರು ಮುಖ್ಯ ಪಾತ್ರದಲ್ಲಿದ್ದಾರೆ. == ಕಥೆ == ಮಲ್ಪೆ ಊರಿನ ಅಲೆಗಳಿಂದ ಶುರುವಾಗಿ, ಅಲ್ಲಿಯ ಒಂದು ಘಟನೆ ನಡೆದಿರುವ ಬಗ್ಗೆ ಬೇರೆ ಬೇರೆ ಜನರು ಅವರ ದೃಷ್ಟಿಕೋನದಿಂದ ನೋಡುವುದರ ಬಗ್ಗೆ ಈ ಚಿತ್ರ. == ಜನರ ಸ್ವೀಕಾರ == ಟ್ರೈಲರ್ ಬಿಡುಗಡೆಯಾದ ೪೮ ಗಂಟೆಗಳಲ್ಲಿ ಯೂಟ್ಯೂಬ್ನಲ್ಲಿ ೪೪,೬೧೮ ಜನರು ವೀಕ್ಷಿಸಿರುವ ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಈ ಚಿತ್ರ ಮಾಡಿತು. ಜನರು ಚಿತ್ರವನ್ನು ಉತ್ತಮವಾಗಿ ಸ್ವೀಕರಿಸಿದರು. ಟೈಮ್ಸ್ ಆಫ್ ಇಂಡಿಯಾ ಹಾಗು ಡೆಕ್ಕನ್ ಹೆರಾಲ್ಡ್ ೫ಕ್ಕೆ ೩ ಕೊಟ್ಟರು. ಐ.ಎಮ್.ಡಿ.ಬಿಯಲ್ಲಿ ಚಿತ್ರಕ್ಕೆ ೧೦ಕ್ಕೆ ೯.೩ ದಾಖಲಾಯಿತು. ಸಿಫಿ.ಕಾಮ್ ಚಿತ್ರವನ್ನು ಕನ್ನಡ ಚಿತ್ರರಂಗದಲ್ಲಿ ಒಂದು ವೇವ್ ಆಫ್ ಫ್ರೆಷ್ನೆಸ್ಸ್(ಹೊಸ ತಾಜಾತನವನ್ನು ತರುವ ಚಿತ್ರ) ಎಂದು ಹೊಗಳುತ್ತಾರೆ. == ತಾರಾಗಣ == ರಕ್ಷಿತ್ ಶೆಟ್ಟಿ ಪಾತ್ರ ರಿಚ್ಚಿ ಕಿಶೋರ್ ಪಾತ್ರ ಮುನ್ನ ತಾರಾ ಪಾತ್ರ ರತ್ನಕ್ಕ ರಿಷಬ್ ಪಾತ್ರ ರಘು ಅಚ್ಯುತ್ ಕುಮಾರ್ ಪಾತ್ರ ಬಾಲು ಶೀತಲ್ ಪಾತ್ರ ರೆಜಿನಾ ಪ್ರಮೋದ್ ಶೆಟ್ಟಿ (ನಟ) ಪಾತ್ರ ದಿನೇಶ ಯಜ್ನ ಶೆಟ್ಟಿ ಪಾತ್ರ ಶಾರದ ದಿನೇಶ್ ಮಂಗಳೂರು ಪಾತ್ರ ಶಂಕರ್ ಪೂಜಾರಿ == ಬಿಡುಗಡೆ == ೨೮-೦೩-೨೦೧೪ == ಆಕರಗಳು == == ಇತರೆ ಮಾಹಿತಿ == ಉಳಿದವರು ಕಂಡಂತೆ @ ಐ ಎಮ್ ಡಿ ಬಿ